ಸಿಂಹ ಹಾಕಿದ ಹೆಜ್ಜೆ U ಸರ್ಟಿಫಿಕೇಟ್
Posted date: 28 Mon, Nov 2016 – 12:07:11 PM

ಪತಿ ಫಿಲಂಸ್ ಲಾಂಛನದಡಿಯಲ್ಲಿ ಶ್ರೀ ಪಾರ್ಥಸಾರಥಿ, ಗೌತಂ ಸೇಠ್ ನಿರ್ಮಿಸಿರುವ ಸಿಂಹ ಹಾಕಿದ ಹೆಜ್ಜೆ ಚಿತ್ರವನ್ನು ಸೆನ್ಸಾರ್‌ನವರು ವೀಕ್ಷಿಸಿ ಸಾರ್ವಜನಿಕ ಪ್ರದರ್ಶನಕ್ಕೆ ಯೋಗ್ಯವಾದ U ಸರ್ಟಿಫಿಕೇಟ್ ನೀಡಿದ್ದಾರೆ.
ಚಿತ್ರವು ಡಿಸೆಂಬರ್‌ನಲ್ಲಿ ರಾಜ್ಯಾದ್ಯಂತ ತೆರೆಕಾಣಲಿದೆ ಎಂದು ನಿರ್ಮಾಪಕ ಪಾರ್ಥಸಾರಥಿ ತಿಳಿಸಿದ್ದಾರೆ.
ಪಕ್ಕಾ ವಿಷ್ಣುವರ್ಧನ್ ಅಭಿಮಾನಿಯಾದ ಈ ಚಿತ್ರದ ನಿರ್ಮಾಪಕ ಪಾರ್ಥಸಾರಥಿ ಚಿತ್ರವನ್ನು ವಿಷ್ಣುವರ್ಧನ್‌ಗೆ ಸಮರ್ಪಿಸುತ್ತಿದ್ದೇವೆ ಎಂದಿದ್ದಾರೆ.

ಚಿತ್ರಕ್ಕೆ ಪಾರ್ಥಸಾರಥಿ ಕಥೆ, ರವಿಶಂಕರ್‌ನಾಗ್ ಸಂಭಾಷಣೆ, ಶಿವಕುಮಾರ್ ಛಾಯಾಗ್ರಹಣ, ಹರಿಬಾಬು ಸಂಗೀತ, ಮಂಜು ಮೋಹನ್ ಸಾಹಿತ್ಯ, ರಾಜು ನೃತ್ಯ, ವಿಶ್ವ ಸಂಕಲನ, ಬಾಬುಖಾನ್ ಕಲೆ, ವೇಣುಗೋಪಾಲ್ ನಿರ್ಮಾಣ ಮೇಲ್ವಿಚಾರಣೆ ಇದ್ದು, ಚಿತ್ರಕಥೆ, ಸಾಹಸ ಮತ್ತು ನಿರ್ದೇಶನ ವಿಕ್ರಂ.
ತಾರಾಗಣದಲ್ಲಿ ಪ್ರೀತಂ, ಅಮೃತ, ಶರತ್ ಲೋಹಿತಾಶ್ವ, ಶೋಭರಾಜ್, ಪವನ್, ತಬಲ ನಾಣಿ, ಸಂಗೀತ, ಸೋನು ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed